ಯೋಜನೆಯ ಬಗ್ಗೆ | About Project


ಏನಿದು ಕೇಳಿ ಕಥೆಯ ? | What is Keli Katheya?

ಕೇಳಿ ಕಥೆಯ ಕನ್ನಡದ ಆರು ವಿಶಿಷ್ಠ ಕತೆಗಳನ್ನೊಳಗೊಂಡ ಸಿ.ಡಿ ಸಂಗ್ರಹ.
Keli Katheya is an Audio CD compilation of selected finest Kannada short stories.

ಹುಟ್ಟು | Origin

ಕೇಳಿ ಕಥೆಯ ಪರಿಕಲ್ಪನೆ ಹುಟ್ಟಿದ್ದು ಅಕಸ್ಮಾತ್ತಾಗಿ. ಆದರೆ ಉದ್ದೇಶ ಮಾತ್ರ ಆಕಸ್ಮಿಕವಲ್ಲ. ಪೂರ್ಣಚಂದ್ರ ತೇಜಸ್ವಿಯವರಿಂದ ಹಿಡಿದು ಯುವ ಕವಿ ವಿಕ್ರಂ ಹತ್ವಾರರ ಕಥೆಯೂ ಸೇರಿದಂತೆ ಒಟ್ಟು ಆರು ಕಥೆಗಳೂ ಒಂದಕ್ಕೊಂದು ವಿಭಿನ್ನ, ವಿಶಿಷ್ಠ. ಈ ಎಲ್ಲ ಕಥೆಗಳನ್ನೂ ಕನ್ನಡದ ಆರು ಅಪೂರ್ವ ದನಿಗಳು ನಮಗಾಗಿ ಓದಿವೆ .
Conceptualization of Keli Katheya was by chance. However, the objective is definitely purposeful and towards a good cause. Right from Poornachandra Tejaswi to young literary icon Vikram Hatwar, all the six stories are distinctive and exclusive. The six stories are beautifully narrated by well-known voices from the fields of Kannada theatre, film and music.

ಉದ್ದೇಶ | Objective

ಕೆಲವು ಚಿಕ್ಕ ಕಥೆಗಳಿಂದ ದೊಡ್ಡ ಕಥೆಗಳು ಪ್ರಾರಂಭವಾಗುವ ಹಾಗೆ, ನೀವು ಕೊಂಡುಕೊಳ್ಳುವ ಪ್ರತಿ ಸಿ.ಡಿ.ಯ ಎಲ್ಲಾ ಲಾಭಂಶವು ಅವಿರತ ಪ್ರತಿಷ್ಠಾನದ ಮೂಲಕ ಗಡಿನಾಡ ಕನ್ನಡ ಸರ್ಕಾರಿ ಶಾಲೆಗಳ ಗ್ರಾಮೀಣ ವಿದ್ಯಾರ್ಥಿಗಳ ಉಪಯೋಗಕ್ಕೆ ಮೀಸಲು.
As short stories can lead to beginning of larger ones, 100% profit of each audio CD that you buy will go towards Government schools from border areas of Karnataka, through Aviratha organization.

ಆರು ಕಥೆಗಳು ಯಾವುವು? | What are these six stories?

ವೈವಿಧ್ಯತೆಯನ್ನು ಮನದಲ್ಲಿಟ್ಟುಕೊಂಡು ಈ ಕೆಳಗಿನ ಆರು ಕಥೆಗಳನ್ನು ಈ ಸಾಂದ್ರಿಕೆಗಾಗಿ ಆಯ್ದುಕೊಳ್ಳಲಾಯಿತು.

ಡೇರ್ ಡೆವಿಲ್ ಮುಸ್ತಫಾ: ಪೂರ್ಣ ಚಂದ್ರ ತೇಜಸ್ವಿ
ದಗಡೂ ಪರಬನ ಅಶ್ವಮೇಧ: ಜಯಂತ ಕಾಯ್ಕಿಣಿ
ಮಸೀದಿ ಬಿದ್ದ ಮೂರನೇ ದಿನ: ರವಿ ಬೆಳಗೆರೆ
ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು: ನಾ ಡಿಸೋಜಾ
ಕೆಂಪು ಗಿಣಿ: ವಸುಧೇಂದ್ರ
ಕಾಯಕವೇ ಕೈಲಾಸ: ವಿಕ್ರಮ್ ಹತ್ವಾರ್

Laying emphasis on variety, below mentioned six Kannada short stories are assorted into this audio CD.

Dare Devil Mustafa: Poornachandra Tejaswi
DagaDu Parabana Ashwamedha: Jayant Kaikini
MasIdi Bidda Moorane Dina: Ravi Belagere
Puttajji Puttajji Kathe Helu: Na D’Souza
Kempu Gini: Vasudhendra
Kayakave Kailasa: Vikram Hatwar

ಇದನ್ನ ಓದುತ್ತಿರುವವರು ಯಾರು..?

ಡೇರ್ ಡೆವಿಲ್ ಮುಸ್ತಫಾ - ಸುಚೇಂದ್ರ ಪ್ರಸಾದ್
ದಗಡೂ ಪರಬನ ಅಶ್ವಮೇಧ - ಪ್ರಕಾಶ್ ರೈ
ಮಸೀದಿ ಬಿದ್ದ ಮೂರನೇ ದಿನ - ಟಿ ಎಸ್ ನಾಗಾಭರಣ
ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು - ಎಮ್ ಡಿ ಪಲ್ಲವಿ ಅರುಣ್
ಕೆಂಪು ಗಿಣಿ - ಕಿಶೋರ್
ಕಾಯಕವೇ ಕೈಲಾಸ - ರಕ್ಷಿತ್ ಶೆಟ್ಟಿ

Dare Devil Mustafa - Suchendra Prasad
DagaDu Parabana Ashwamedha - Prakash Rai
MasIdi Bidda Moorane Dina - T S Nagabharana
Puttajji Puttajji Kathe Helu - M D Pallavi
Kempu Gini - Kishore
Kayakave Kailasa - Rakshit Shetty

ಕಥಾ ಪರಿಚಯ | Introduction to the stories

ಡೇರ್ ಡೆವಿಲ್ ಮುಸ್ತಫಾ : ನಮ್ಮೆಲ್ಲರ ಮೆಚ್ಚಿನ ತೇಜಸ್ವಿಯವರ ಎಂದಿನ ಹಾಸ್ಯ ಶೈಲಿಯ ಕತೆ ಡೇರ್ ಡೆವಿಲ್ ಮುಸ್ತಫಾ. ತಮ್ಮೆದುರು ತೆರೆದುಕೊಳ್ಳುತ್ತಿರುವ ಹೊಸ ಜಗತ್ತಿನಲ್ಲಿ ಅಚ್ಚರಿಯಿಂದ ನಿಂತಿರುವ ಇಬ್ಬರು ವಿಭಿನ್ನ ಸಮುದಾಯದಿಂದ ಬಂದ ಕಾಲೇಜು ವಿದ್ಯಾರ್ಥಿಗಳ ಕತೆ.
ದಗಡೂ ಪರಬನ ಅಶ್ವಮೇಧ: ಜಯಂತರು ಮಾತ್ರ ಬರೆಯಬಹುದಾದ ಕತೆ. ತಮ್ಮನ ಮದುವೆಯಲ್ಲಿ ಬೇರೆಯಾಗುವ ಅಣ್ಣ ತಮ್ಮಂದಿರ ಹೃದಯಸ್ಪರ್ಶಿ ಕತೆ ಮುಂಬೈನ ಪರಿಸರದಲ್ಲಿ ಚಿತ್ರಿತವಾಗಿದೆ.
ಮಸೀದಿ ಬಿದ್ದ ಮೂರನೇ ದಿನ: ಬಾಬ್ರಿ ಮಸೀದಿ ಧ್ವಂಸದ ಸಂದರ್ಭದಲ್ಲಿ ಹೆಣೆಯಲಾದ ಕತೆ. ರಾತ್ರಿ ಕಾವಲುಗಾರ ತನ್ನ ಬದುಕು ಮತ್ತು ಪ್ರಿಯತಮೆಯೊಂದಿಗಿನ ಸಂಬಂಧವನ್ನ ಮಾನವೀಯ ಎಳೆಯೊಂದಿಗೆ ನೋಡುವ ಕಥನ.
ಕೆಂಪು ಗಿಣಿ: ಈ ಹೃದಯಸ್ಪರ್ಶಿ ಕತೆ ಸಾಫ್ಟವೇರ್ ಇಂಜಿನಿಯರ್ ಒಬ್ಬ ತಾನು ಬಿಟ್ಟ ಬೇರುಗಳನ್ನು ಹುಡುಕಿ ಹೊರಟ ಕತೆ. ಅವನು ಬಿಟ್ಟು ಹೋದ ಬಳ್ಳಾರಿಯ ಬೇರುಗಳಿನ್ನೂ ಅಲ್ಲಿವೆಯೇ..?
ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು: ನಾ ಡಿಸೋಜಾ ಬರೆದ ಅಪ್ಪಟ ಮಕ್ಕಳ ಕತೆಗಳು. ಪುಟ್ಟಜ್ಜಿ ಮಕ್ಕಳಿಗೆ ಹೇಳುವ ಈ ಕತೆಗಳನ್ನ ಕೇಳಿಸಿಕೊಳ್ಳಬೇಕಾದವರು ದೊಡ್ಡವರು.
ಕಾಯಕವೇ ಕೈಲಾಸ: ನ್ಯೂ ಯಾರ್ಕಿನ ಹಿನ್ನೆಲೆ ಹೊಂದಿರುವ ಈ ಕತೆಯಲ್ಲಿ ಇಬ್ಬರು ಸಾಫ್ಟವೇರ್ ಇಂಜಿನಿಯರ್ ಗಳು ಬದುಕನ್ನು ನೋಡುವ ಭಿನ್ನ ರೀತಿ ಸಮರ್ಥವಾಗಿ ದಾಖಲಾಗಿದೆ.

Dare Devil Mustafa : This short story has the usual flavor of humor from our beloved Purnachandra Tejaswi. The story is about two students from different communities, as they cope up with the new world unfolding in front of them.
DagaDu Parabana Ashwamedha: Only Jayant Kaikini can conceptualize such a story. This heart rending story setup in Mumbai city, is about two brothers who separate during the younger brother’s wedding.
MasIdi Bidda Moorane Dina: Story embedded in the context and time of Babri Masjid destruction. Tale of a night watchman as he confronts the conflicts of his relationship with his lover and his life.
Kempu Gini: This touching story of a software engineer as he explores his roots from his past. Is he successful in getting to his origin from Bellary that he had left behind?.
Puttajji Puttajji Kathe Helu: Selected from Na D’Souza’s stories for children as narrated by puTTajji.
Kayakave Kailasa: A story about varied perceptions of life as visualized by two software engineers, set up in the backdrop of New York city.

ಇದರ ಬೆಲೆ ಎಷ್ಟು..? | What does it cost?

  • India : Rs 150*
  • US: $6
  • Euros:7
  • Australia: $8
  • UK (Pounds): 5
  • UAE/Middle east: 15 Dirhams or equivavlent
ಈ ಕಥಾ ಸಿ ಡಿ ಗಳು ಎಲ್ಲಿ ದೊರೆಯುತ್ತವೆ? | How can you gain access to these audio CDs?

ಸದ್ಯ ಕೆಲಸವಿನ್ನೂ ಪ್ರಗತಿಯಲ್ಲಿದೆ. ಮುಂಗಡ ಬುಕ್ಕಿಂಗ್ ಗಾಗಿ ಗೂಗಲ್ ಫಾರಂ ತುಂಬಿಸಿ, ಈ ಕೆಳಕಂಡ ಬ್ಯಾಂಕ್ ಅಕೌಂಟ್ ನಂ ಗೆ ಕಳಿಸಿ ಉಚಿತ ಅಂಚೆಯಲ್ಲಿ ನಿಮಗೆ ತಲುಪಿಸುತ್ತೇವೆ(ಈ ಸೌಲಭ್ಯ ಭಾರತದಲ್ಲಿ) ಮಾತ್ರ.
ನೀವು ವಿದೇಶದಲ್ಲಿ ಇದ್ದರೆ ನಿಮ್ಮ ಹೆಸರು ಹಾಗು ವಿಳಾಸವನ್ನು ಗೂಗಲ್ ಫಾರಂ ನಲ್ಲಿ ತುಂಬಿ, ತಮಗೆ ಪತ್ರ ಬರೆದು ಅದನ್ನು ಹೇಗೆ ಪಡೆಯ ಬಹುದು ಎಂದು ತಿಳಿಸುತ್ತೇವೆ.
Production work is currently in progress. For pre booking, fill up the available google form and we can deliver it to you (free shipping only in India). If you are located outside India, please mention your name and address in the google form and we will get in touch with you over email on how you will receive it.

ಆನ್ ಲೈನ್ ನಲ್ಲಿ ಖರೀದಿಸಬಹುದಾ? | Is the audio CD available online?

ಹೌದು. ಆಗಸ್ಟ್ ಕೊನೆಯ ವಾರದಿಂದ ಇದನ್ನು ನೀವು flipkart.com, amazon.com, sapnaonline.com , itues , Nokia Music Store ನಲ್ಲಿ ಕೊಳ್ಳ ಬಹುದು
Absolutely. From August last week, the audio CD will be available for buying online from flipkart.com, amazon.com, sapnaonline.com, itues , Nokia Music Store.

ನಮ್ಮ ಬಗ್ಗೆ | About us

ನಮ್ಮದೊಂದು ಕಲೆಯ ಹುಚ್ಚು ಅಂಟಿಕೊಂಡಿರುವ ಗೆಳೆಯರ ಬಳಗ . ಈ ಪ್ರಯತ್ನದಲ್ಲಿ ನಮ್ಮೊಂದಿಗೆ ಹಲವಾರು ಮಂದಿ ಕೈಜೋಡಿಸಿದ್ದಾರೆ .

ಮುಕುಂದ್ ಸೆಟ್ಲೂರ್ | ಕಿರಣ್ ಮಂಜುನಾಥ್ | ನಿತೇಶ್ ಕುಂಟಾಡಿ | ಸತೀಶ್ ಗೌಡ
ರೂಪ ಲಕ್ಷ್ಮಿ | ಹರೀಶ್ ಮಲ್ಯ | ಪ್ರಮೋದ್ ಪಟಗಾರ್ | ಮಾನಸ ಭಾರದ್ವಾಜ್

ಶೀರ್ಷಿಕೆ ಗೀತೆ : ಭರತ್ ಬಿ ಜೆ

ಸಾರ್ವಜನಿಕ ಸಂಪರ್ಕ : ರಘು

We are a group of friends who share a common interest to grow this medium of art form. A good number of people have joined us in this effort.

Mukund Setlur | Kiran Manjunath | Nitesh Kuntady | Satish Gowda
Roopa Lakshmi| Harish Mallya | Pramod Patgar | Manasa Bharadwaj

Title Song : Bharat BJ

Public Relations : Raghu

ನಮ್ಮ ಆಶಯ | Our Aspiration

ನಮ್ಮದು ವಿಭಿನ್ನ ಪ್ರಯತ್ನವಲ್ಲವಾದರೂ, ಉದ್ದೇಶ ಮಾತ್ರ ವಿಶಿಷ್ಠ. ನೀವು ಕೊಳ್ಳಿ, ನಿಮ್ಮ ಗೆಳೆಯರನ್ನು ಕೊಂಡುಕೊಳ್ಳಲು ಪ್ರೇರೇಪಿಸಿ. ಒಂದೊಳ್ಳೆಯ ಉದ್ದೇಶದಲ್ಲಿ ನೀವು ಪಾಲ್ಗೊಳ್ಳಿ.
Though our efforts are not very unique, the objective is exceptional. Please purchase this audio CD and encourage your friends and relatives to also own one. Participate in this good cause.